ಹೋಮ್ ಮಿನಿಸ್ಟರ್ 2022 ರ ಭಾರತೀಯ ಕನ್ನಡ ಭಾಷೆಯ ಆಕ್ಷನ್ ಹಾಸ್ಯ ಚಲನಚಿತ್ರವಾಗಿದೆ ಸುಜಯ್ ಕೆ. ಶ್ರೀಹರಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಪೂರ್ಣ ನಾಯ್ಡು ನಿರ್ಮಿಸಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ಉಪೇಂದ್ರ, ವೇದಿಕಾ, ತಾನ್ಯಾ ಹೋಪ್, ಸುಮನ್ ರಂಗನಾಥನ್ ಮತ್ತು ಆಧ್ಯ ನಟಿಸಿದ್ದಾರೆ. == ಕಥೆ == ರೇಣುಕಾ ಪ್ರಸಾದ್ ಗೃಹಸ್ಥನಾಗಿದ್ದು, ತನಿಖಾ ವರದಿಗಾರ್ತಿಯಾಗಿರುವ ಪತ್ನಿ ಸುರೇಖಾ, ಮತ್ತು ಮಗಳು ಕುಂದನಾ ಅವರೊಂದಿಗೆ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ವಾಸಿಸುತ್ತಿರುತ್ತಾನೆ. ರೇಣು ತನ್ನ ತಂದೆಯ ಆಪರೇಷನ್‌ಗಾಗಿ ಸುರೇಖಾ ವಹಿಸಿದ್ದ ₹20 ಲಕ್ಷ (ಯುಎಸ್$೪೪,೪೦೦) ಕಳೆದುಕೊಂಡಾಗ . ರೇಣುಕಾ ಪ್ರಸಾದ್ ಗೃಹಸ್ಥನ ಜವಾಬ್ದಾರಿಯನ್ನು ಏಕೆ ತೆಗೆದುಕೊಂಡ ಮತ್ತು ಅವನು ಹಣವನ್ನು ಮರುಪಡೆಯುತ್ತಾನೆಯೇ ಎಂಬುದು ಉಳಿದ ಕಥೆ. == ಪಾತ್ರವರ್ಗ == ರೇಣುಕಾ ಪ್ರಸಾದ್ ಆಗಿ ಉಪೇಂದ್ರ ಸುರೇಖಾ ಪಾತ್ರದಲ್ಲಿ ವೇದಿಕಾ ಜೆಸ್ಸಿಯಾಗಿ ತಾನ್ಯಾ ಹೋಪ್ ಸುಮನ್ ರಂಗನಾಥನ್ ಅಭಿಮನ್ಯು ಸಿಂಗ್ ರೇಣುಕಾ ತಂದೆಯಾಗಿ ಅವಿನಾಶ್ ಸಾಧು ಕೋಕಿಲ ಸುಮನ್ ವಿಜಯ್ ಚೆಂಡೂರ್ ತಿಲಕ್ ಶೇಖರ್ ಕುಂದನಾಗಿ ಆಧ್ಯಾ ರಾಜೇಶ್ ನಟರಂಗೇ == ಧ್ವನಿಮುದ್ರಿಕೆ == ಸೌಂಡ್‌ಟ್ರ್ಯಾಕ್ ಆಲ್ಬಂ ಐದು ಸಿಂಗಲ್‌ಗಳನ್ನು ಗಿಬ್ರಾನ್ ಸಂಯೋಜಿಸಿದ್ದಾರೆ ಮತ್ತು ಆನಂದ್ ಆಡಿಯೊದಲ್ಲಿ ಬಿಡುಗಡೆ ಮಾಡಲಾಗಿದೆ. == ಬಿಡುಗಡೆ == ಚಲನಚಿತ್ರವು 1 ಏಪ್ರಿಲ್ 2022 ರಂದು ಬಿಡುಗಡೆಯಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಹೋಮ್ ಮಿನಿಸ್ಟರ್ @ ಐ ಎಮ್ ಡಿ ಬಿ